ನವದೆಹಲಿ : Turmeric honey benefits : ಏನೇ ಸಮಸ್ಯೆಗಳು ಬರಲಿ ನಮ್ಮ ದೇಶದಲ್ಲಿ ಇಂದಿಗೂ ಮೊದಲು ತಮ್ಮದಾಗಿಸಿಕೊಳ್ಳುವುದು ಅಜ್ಜ ಅಜ್ಜಿಯರ ಕಾಲದಿಂದಲೂ ನಡೆದುಕೊಂಡು ಬಂದ ಮನೆ ಮದ್ದನ್ನೇ. ಈ ಮನೆ ಮದ್ದನ್ನೇ (Home remedies) ಅನುಸರಿಸಿಕೊಂಡು ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಮನೆಮದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಂಥಹ ಮನೆಮದ್ದುಗಳಲ್ಲಿ ಒಂದು ಅರಶಿನ ಮತ್ತು ಜೇನುತುಪ್ಪ (Turmeric and honey).
ಅರಶಿನ ಮತ್ತು ಜೇನುತುಪ್ಪದ ಪ್ರಯೋಜನಗಳನ್ನು ತಿಳಿಯಿರಿ :
ಪುರುಷರ ಈ ಸಮಸ್ಯೆಗಳಿಗೆ ಪರಿಹಾರ : ಅರಿಶಿನ (turmeric) ಮತ್ತು ಜೇನುತುಪ್ಪವು ವೀರ್ಯ ತೆಳುವಾಗುವುದು ಮತ್ತು ಶೀಘ್ರ ಸ್ಖಲನಕ್ಕೆ ರಾಮಬಾಣ. ಈ ಸಮಸ್ಯೆಯಿಂದ ಬಳಲುವವರು ಒಂದು ಚಮಚ ಜೇನುತುಪ್ಪವನ್ನು ಒಂದು ಚಮಚ ಅರಿಶಿನ ಪುಡಿಯೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮಾಡುತ್ತಾ ಬಂದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ : Benefits of Black Pepper: ಕೇವಲ ಅಡುಗೆಯಲ್ಲಷ್ಟೇ ಅಲ್ಲ, ಈ ಕೆಲಸಕ್ಕೂ ನೀವು ಕರಿ ಮೆಣಸು ಬಳಸಬಹುದು
ಶೀತ: ಶೀತದ ಸಮಸ್ಯೆ ಇದ್ದರೆ, ಅರ್ಧ ಚಮಚ ಜೇನುತುಪ್ಪ (Honey) ಮತ್ತು ಅರಿಶಿನ ಮಿಶ್ರಣವನ್ನು ಸೇವಿಸಬೇಕು. ಆದರೆ ನೆನಪಿರಲಿ, ಇದನ್ನು ಸೇವಿಸಿದ ನಂತರ ಸ್ವಲ್ಪ ಹೊತ್ತು ನೀರು ಕುಡಿಯಬಾರದು. ಬೇಕಾದರೆ, ಈ ಮಿಶ್ರಣಕ್ಕೆ ತುಳಸಿಯನ್ನು ಕೂಡಾ ಸೇರಿಸಬಹುದು. ಊಟದ ನಂತರ ಅರಿಶಿನವನ್ನು ಸೇವಿಸುವುದರಿಂದ ಮೂತ್ರಪಿಂಡಗಳು (Kidney) ಮತ್ತು ಶ್ವಾಸಕೋಶಗಳಿಗೆ ಪ್ರಯೋಜನಕಾರಿ.
ಹೃದಯಕ್ಕೆ ಪ್ರಯೋಜನಕಾರಿ : ಹೃದಯ ಕಾಯಿಲೆಯ (heart disease) ತಡೆಗಟ್ಟಲು, ಅರಿಶಿನ ಮತ್ತು ಜೇನುತುಪ್ಪವನ್ನು ಸೇವಿಸಬೇಕು. ಇದು ಹೃದ್ರೋಗವನ್ನು ತಡೆಯಲು ಸಹಾಯಮಾಡುತ್ತದೆ. ಅರಿಶಿನವು ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ : ನಸುಕಂದು ಮಚ್ಚೆಗಳು, ಸುಕ್ಕುಗಳು, ಕಲೆಗಳು ಮುಂತಾದ ಸಮಸ್ಯೆಗಳ ನಿವಾರಣೆಗೆ ಅರಿಶಿನ, ಜೇನು ಮತ್ತು ರೋಸ್ ವಾಟರ್ (rose water) ಮಿಶ್ರಣ ಉತ್ತಮ ಪರಿಹಾರ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಣಗುವವರೆಗೆ ಬಿಡಬೇಕು. ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು.
ಇದನ್ನೂ ಓದಿ : ಹಾಲಿನಲ್ಲಿ ಒಂದು ತುಂಡು ಬೆಲ್ಲ ಬೆರೆಸಿ ಕುಡಿದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ